ಹೀಗೆ ನೀವೂ

– (ಪಂ. ರಾಜಶೇಖರ ಮನ್ಸೂರ್ ಕುರಿತ ಕವನ)

ಸುರಿವ ಮಳೆಹನಿಗಳ ಬೊಗಸೆಯಲ್ಲಿ ಹಿಡಿದು, ಸಮುದ್ರ ಮಾಡಿದಿರಿ
ಉಪ್ಪುಂಡ ಸಮುದ್ರ
ನಿಮ್ಮ ಸ್ಪರ್ಷದಿಂದ ತಿಳಿ ನೀರಾಯಿತು

ಹರಿದು ಚೂರಾದ ಮನಗಳ
ಬಯಲ ಸೂಜಿಯ ಹಿಡಿದು
ಲೋಕಾಂತವ ಹೊಲಿದು
ಆಕಾಶವ ಮಾಡಿದಿರಿ. ಆಕಾಶ ನಂದನ ವನವಾಯಿತು

ನಕ್ಷತ್ರಗಳ ಉತ್ತಿ ಬಿತ್ತಿ ಮುತ್ತಿನ ಬೆಳೆ ಬೆಳಿದಿರಿ. ಹಕ್ಕಿಹಿಂಡುಗಳು ಬಂದು
ತಿಂದುಂಡು ಹಿಕ್ಕಿ ಹಾಕಿ ಹೋದವು
ಅದನ್ನೇ ಗೊಬ್ಬರ ಮಾಡಿ ಉತ್ತುತ್ತಲೇ ಇದ್ದೀರಿ

ಬಣ್ಣ ಬಣ್ಣದ ಕುಲಾಯಿಗಳ ಹಿಡಿದ ದಂಡು ನಿಮ್ಮ ತೋಟದ ತೆನೆಗಳ ತಿನ್ನಲು ಬೆನ್ನತ್ತಿದವು. ಬೆನ್ನು ಬಾಗಿಸದೆ
ಹೊತ್ತು ಮುನ್ನೆಡಿದಿರಿ ನಿಮ್ಮದೇ ದಾರಿಯಲಿ

ರಾಗಗಳ ಜೋಳಿಗೆಯಲಿ ಪ್ರತಿಭೆಗಳ ತುಂಬಿಸಿದಿರಿ. ಮುಂದೊಂದು ದಿನ ‌ಬನದ ಹೂಗಳು ಅರಳಿ ಮಂದಾರ ಬೀಸಲೆಂದು

ಭವದ ಕೋಲಿನಲಿ ಅನುಭಾವವ ಊರಿದಿರಿ. ಬಯಲ ನಡೆ ನುಡಿಯ ತೊಟ್ಟು, ಕರುಣೆಯ ಕಳಸ ಹೊತ್ತು ನಡೆಯೂತ್ತಲೇ ಇದ್ದೀರಿ ಘರಾನದ ನಾಡಿನಲಿ

  • ಡಾ. ರಾಜಶೇಖರ ಹಳೆಮನೆ, ಉಜಿರೆ

“Thou art thus”

(Translated from Kannada by Dr. Chandrika Kamat, Hubli)

You caught the falling raindrops
In the cup of your palms
and turned them into an ocean
The salt fed sea
Became pristine sweet water
By your magical touch

You made the space a needle
To stitch the Minds
Which were torn into smithereens
And created a sky
Which turned into the celestial woods

You ploughed and planted the stars
To reap a crop of precious pearls
A flock of birds ravished your crop
You just let the waste nourish and nurture

An army of colourful enticing bonnets
Hounded the tender ears of corn
But you walked your way
Without bending to their intrusions

You filled the bag of ragas
With your creative talent
So that a flower may bloom
In the years that ensue

You planted a stake of mysticism
In the impermanent cycle of life
Words and actions crowned with kindness
As you walked steadfastly in the path
Entrusted by the Gharana

Share